ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ ಇದು ಸಾರ್ವಜನಿಕ ಗ್ರಂಥಾಲಯ. ಈ ಕಟ್ಟಡವನ್ನು ೧೮೯೧ರಲ್ಲಿ ನವಾಬ್ ಇಮಾದ್-ಉಲ್-ಮುಲ್ಕ ಎಂಬುವರು ಕಟ್ಟಿಸಿದರು. ಇದನ್ನು ಮೊದಲು ಅಸಾಫಿಯ ಗ್ರಂಥಾಲಯವೆಂದು ಕರೆಯುತ್ತಿದ್ದರು. ಈ ಗ್ರಂಥಾಲಯವು ಅಫ್ಜಲ್ ಗಂಜಿನಲ್ಲಿ ಮೂಸಿ ನದಿಯ ದಡದಲ್ಲಿದೆ. ಇದರಲ್ಲಿ ೫೦೦,೦೦೦ ಪುಸ್ತಕಗಳು, ವೃತ್ತ ಪತ್ರಿಕೆಗಳು ಹಾಗು ವಿಶಿಷ್ಟವಾದ ತಾಳೆಗರಿಯ ಸಂಗ್ರಹ ಇದೆ. == ಪುಸ್ತಕಗಳ ಸಂಖ್ಯೆ == ೧ನೇ ಏಪ್ರಿಲ್ ೨೦೦೪ ರ ವರೆಗೆ ಇದ್ದ ೪,೪೧,೫೭೩ ಪುಸ್ತಕಗಳ ವಿವರಗಳು ಕೆಳಗಿನಂತಿವೆ. ೧೯೪೧ ರಲ್ಲಿ ಪ್ರಕಟವಾದ ಹೈದರಾಬಾದ ಸಮಾಚಾರ ಮಾಸ ಪತ್ರಿಕೆಯೂ ಇಲ್ಲಿ ಲಭ್ಯ.